
ಸ್ಥಳ ಪುರಾಣ
ಸತ್ಯಯುಗದಲ್ಲಿ ಭಾರ್ಗವಮಹರ್ಷಿ ತಪಸ್ಸನ್ನು ಆಚರಿಸಿ ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಪಡೆದಂತ ಕ್ಷೇತ್ರ.
ಆ ಸ್ತೋತ್ರದ ಜಪದಿಂದ ಭಾರ್ಗವ ಮಹರ್ಷಿ ಗೆ ದರ್ಶನವನ್ನು ಕೊಟ್ಟರು ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ.
ಶಂಖ, ಚಕ್ರಗಳನ್ನು ಧರಿಸಿ ಅಭಯ ಮುದ್ರೆಯನ್ನು ನೀಡುತ್ತಾ ಲಕ್ಷ್ಮ್ಯಾಲಿಂಗಿತ ನಾಗಿ ಮುಗುಳ್ನಗೆಯನ್ನು ಬೀರುತ್ತಾ
ಸಹಸ್ರಚಂದ್ರ ಕಾಂತಿಯುತ ಜಗನ್ಮೋಹನಕರವಾದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿಯು ಭಾರ್ಗವ ಮಹರ್ಷಿಯ ಬೇಡಿಕೆಯಂತೇ ಈ ಕ್ಷೇತ್ರದಲ್ಲಿ ನೆಲೆಸಿ ಭಕ್ತರನ್ನು ಅನುಗ್ರಹಿಸುವುದಾಗಿ ವರವನ್ನಿತ್ತರು.
ಸತ್ಯಯುಗದಲ್ಲಿ ಹನ್ನೊಂದು ಅಡಿ ಎತ್ತರದ ಅರ್ಚಾಮೂರ್ತಿಯಾಗಿ(ಸಾಲಿಗ್ರಾಮ ಮೂರ್ತಿ) ದರ್ಶನವನ್ನು ಕೊಡುತ್ತಾ ಇದ್ದಂತಹ ಸ್ವಾಮಿ ಧರ್ಮವು ಕಡಿಮೆಯಾದಂತೆಯಲ್ಲಾ
ತ್ರೇತಾಯುಗದಲ್ಲಿ ಒಂಭತ್ತು ಅಡಿ
ದ್ವಾಪರ ಯುಗದಲ್ಲಿ ಆರು ಅಡಿ
ಈಗ ಕಲಿಯುಗದಲ್ಲಿ ಎರಡೂವರೆ ಅಡಿ ಎತ್ತರದ ಸ್ವರೂಪದಲ್ಲಿ ದರ್ಶನವನ್ನು ಪಡೆಯಬಹುದು.
ನಾಲ್ಕುಯುಗಗಳಿಂದ ಈ ಕ್ಷೇತ್ರದಲ್ಲಿ ನೆಲೆಸಿ ಯುಗಧರ್ಮಕ್ಕೆ ತಕ್ಕಂತೆ ತನ್ನನ್ನು ಬದಲಿಕೊಂಡು ಭಕ್ತಸುಲಭನಾಗಿರುವುದರಿಂದ ಇವರನ್ನು *ಯುಗನಾರಾಯಣ ಸ್ವಾಮಿ* ಎಂದು ಕರೆಯುತ್ತಾರೆ.

ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿದಂತ ಕ್ಷೇತ್ರ.
ಯಾವದೇ ಕ್ಷೇತ್ರದಲ್ಲಿ ಅಥವಾ ಸನ್ನಿಧಿಯಲ್ಲಿ ಅಮ್ಮನವರ ಅನುಗ್ರಹ ಪಡೆಯಲು ಸ್ವಾಮಿ ಅನುಮತಿ ಇರಬೇಕು.
ಅನುಮತಿ ದೊರೆತರೂ ಒಂದು ಪ್ರಾರ್ಥನೆಯನ್ನು ಮಾತ್ರ ಈಡೇರಿಸುತ್ತಾರೆ.
ಆದರೆ ಮೇಲ್ವೆಣ್ಪಾಕ್ಕಂ ಸನ್ನಿಧಿಯಲ್ಲಿ ಅಷ್ಟಲಕ್ಷ್ಮಿಯರು ಒಂದೇ ಸ್ವರೂಪದಲ್ಲಿ ನೆಲೆಸಿ ನಾವು ಯಾವ ಬೇಡಿಕೆಯಿಂದಾಗಿ ಬಂದಿರುವೆವೋ ಆ ರೂಪದಲ್ಲಿ ಒಂದೇ ಸಮಯದಲ್ಲಿ ಸ್ವಾಮಿಯ ಅನುಮತಿ ಇಲ್ಲದೆ ಸ್ವಯಂ ಶ್ರೀ ಮಹಾಲಕ್ಷ್ಮೀ ಅಮ್ಮನವರು ಮೂರು ಅನುಗ್ರಹಗಳನ್ನು(ವರಗಳನ್ನು) ಕೊಡುವಂತಹ ಕ್ಷೇತ್ರ.
ಹಾಗಾಗಿ ಈ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಸ್ವತಂತ್ರ ಲಕ್ಷ್ಮೀ ಎಂಬ ನಾಮವು ವಿಶೇಷ.

ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಪರಬ್ರಹ್ಮಣೇ ನಮಃ:
ಶ್ರೀ ಸ್ವತಂತ್ರಲಕ್ಷ್ಮೀನಾಯಿಕಾ ಸಮೇತ ಶ್ರೀ ಯುಗನಾರಾಯಣ
ದಂಪತಿಗಳು ಸತ್ಯಯುಗದಲ್ಲಿ ಈ ಕ್ಷೇತ್ರದಲ್ಲಿ ನೆಲೆಸಿದ ಕ್ಷಣದಿಂದ ಇಲ್ಲಿಯ ವರೆಗೂ ಸಪ್ತರ್ಷಿಗಳು (ಅತ್ರಿ,ಭೃಗು,ಕುತ್ಸ,ವಶಿಷ್ಠ,ಗೌತಮ,ಕಾಶ್ಯಪ,ಆಂಗೀರಸ,) ಗರ್ಭಾಲಯದಲ್ಲೇ ನಿಂತು ಸ್ವಾಮಿಯನ್ನು ಪ್ರಾರ್ಥೀಸುತ್ತಾ ವಿನಮ್ರರಾಗಿ ಸದಾಕಾಲ ಆ ದಿವ್ಯ ದಂಪತಿಗಳನ್ನು ಸ್ತುತಿಸುತ್ತಿರುವುದರಿಂದ ಇದು ತಪೋಕ್ಷೇತ್ರವಾಗಿದೆ.
ಪ್ರಪಂಚದಲ್ಲೇ ಎಲ್ಲಿಯೂ ಕಾಣದಂತಹ ಒಂದು ಅದ್ಭುತ
ಶ್ರೀ ಮಹಾಲಕ್ಷ್ಮೀ ಅಮ್ಮನವರ ಕಣ್ನೋಟವು ಶ್ರೀ ಯುಗನಾರಾಯಣ ಸ್ವಾಮಿ ಯ ನೋಟವು ಸಮಾನ ರೇಖೇಯಲ್ಲಿ ಬರುವಂತ ಭಕ್ತರ ಮೇಲೆ ಬೀಳುವುದು ತುಂಬಾ ವಿಶೇಷವಾಗಿದೆ.
ಅವರಿಬ್ಬರ ಕಣ್ಣಿನ ನೋಟ ನಮ್ಮ ಮೇಲೆ ಪ್ರಸರಿಸುವುದರಿಂದ ಏನು ಲಾಭ?
ಇಂದ್ರನು ಕ್ಷೀರಸಾಗರ ಮಥನದ ನಂತರ ತನ್ನ ಪದವಿಗಾಗಿ ಹೀಗೆ ಪ್ರಾರ್ಥಿಸುತ್ತಾನೆ.
ಧಾರಾಪುತ್ರಸ್ತದಾಗಾರ ಸುಹೃದ್ಧಾನ್ಯ ಧನಾಧಿಕಂ|
ಭವತ್ಯೇತನ್ಮಹಾಭಾಗೇ ನಿತ್ಯಂ ತ್ವದ್ವೀಕ್ಷಣಾತ್ ನೃಣಾಂ||
ಯೋಗ್ಯವಾದವರೊಂದಿಗೆ ವಿವಾಹ,ಸತ್ಸಂತಾನ,ಗೃ ಹ,ಬಂಧು-ಮಿತ್ರರು, ಅತ್ಯಧಿಕವಾದ ಧನ-ಧಾನ್ಯವು ನಿತ್ಯವೂ ನಿನ್ನ ಕಣ್ಣೋಟ ಯಾರಮೇಲೇ ಬೀರುವುದೋ ಅವರಿಗೆ ಈ
ಸಕಲ ಸೌಖ್ಯ ಗಳು ದೊರೆಯುತ್ತವೆ ಎಂದು ಪ್ರಾರ್ಥಿಸುತ್ತಾನೆ.

ಹಾಗಾಗಿ ಈ ಕ್ಷೇತ್ರದಲ್ಲಿ ವಿವಾಹ ಪ್ರಾರ್ಥನೆ,
ಸತ್ಸಂತಾನಕ್ಕಾಗಿ, ಅನ್ಯೋನ್ಯ ದಾಂಪತ್ಯಕ್ಕಾಗಿ, ವ್ಯಾಪಾರ ಲಾಭ, ಉನ್ನತ ಅಧಿಕಾರ ಪ್ರಾಪ್ತಿಗಾಗಿ, ಸಾಲಬಾಧೆ ನಿವಾರಣೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಜಾತಕದಲ್ಲಿನ ದೋಷ ನಿವಾರಣೆಗಾಗಿ ಹಲವಾರು ಭಕ್ತರು
ಸ್ವಾಮಿಯ ಅಭಿಷೇಕ ದರ್ಶನಕ್ಕೆ ಬರುತ್ತಾರೆ.
ಕಾಲಸರ್ಪ ದೋಷ,ಅಂಗಾರಕ ದೋಷ/ಕುಜ ದೋಷ,
ವಿವಾಹ ಆಲಸ್ಯ, ಸಂತಾನ ಸಮಸ್ಯೆ ಇರುವವರು ಅಭಿಷೇಕದ ಸಮಯದಲ್ಲಿ ಶ್ರೀ ಯುಗನಾರಾಯಣ ಸ್ವಾಮಿಯ ಕೊರಳಲ್ಲಿ ವೈಜಯಂತಿ ಮಾಲೆಯಾಗಿ ಅಲಂಕೃತವಾದ ಆದಿಶೇಷನ ದರ್ಶನದಿಂದ ಸಕಲ ದೋಷಗಳು ನಿವಾರಣೆಯಾಗುತ್ತವೆ ಸಕಾಲದಲ್ಲಿ ವಿವಾಹ, ಸತ್ಸಂತಾನ, ಅನ್ಯೋನ್ಯ ದಾಂಪತ್ಯ, ಧನ ಧಾನ್ಯ ಸಮೃದ್ಧಿ ದೊರೆಯುತ್ತವೆ.

ಜಾತಕದಲ್ಲಿ ಅತ್ಯಂತ ಪ್ರಮಾದಕರವಾದ ದೋಷ ಕಾಲಸರ್ಪ ದೋಷ.
ಇದರ ನಿವಾರಣೆ ತುಂಬಾ ಕಠಿಣ ಆದರೆ ಯಾರು ಶ್ರೀ ಕ್ಷೇತ್ರವನ್ನು ದರ್ಶಿಸುತ್ತಾರೋ ಅವರಿಗೆ ದರ್ಶನಮಾತ್ರದಿಂದಲೇ ಸಕಲ ದೋಷಗಳು ಸ್ವಾಮಿಯ ಕರುಣಾಕಟಾಕ್ಷ ವೀಕ್ಷಣೆಯಿಂದ ನಿವಾರಣೆಯಾಗುತ್ತವೆ.
ಹನ್ನೊಂದು ರಾಜಗೋಪುರಗಳಿಂದ ರಾರಾಜಿಸುತ್ತಿದ್ದ
ಶ್ರೀ ಕ್ಷೇತ್ರದ ಮೇಲೆ ಮೊಘಲರು ದಂಡಯಾತ್ರೆಗೆ ಬರುವ ಸಮಯದಲ್ಲಿ ಸ್ವಾಮಿಯ ಸೇವೆಯಲ್ಲಿದ್ದ ಶ್ರೀಉಪನಿಷದ್ಬ್ರಹ್ಮೇಂದ್ರ ಮಠದ ಸ್ವಾಮಿಗಳು ಮೂಲ ಮೂರ್ತಿಯನ್ನು ರಕ್ಷಿಸುವ ಸಲುವಾಗಿ ಮೈಸೂರಿನ ಸಮೀಪಕ್ಕೆ ಕೊಂಡೊಯ್ದರು .
ಕೆಲವು ವರ್ಷಗಳ ಕಾಲ ಅಲ್ಲಿಯೇ ಸ್ವಾಮಿಗೆ ನಿತ್ಯ ಪೂಜಾದಿಗಳು ನೆರವೇರಿಸುತ್ತಾ ಬಂದರು.
ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿ ರಕ್ಷಣೆ ಹೊಂದುತ್ತಿರುವ ಆ ಪ್ರಾಂತ್ಯದ ಅರಸನಿಗೆ ಸ್ವಾಮಿಯ ಮೇಲೆ ಅಪಾರವಾದ ಭಕ್ತಿ.
ಒಂದು ದಿನ ಶ್ರೀಉಪನಿಷದ್ಬ್ರಹ್ಮೇಂದ್ರ ಮಠದ ಸ್ವಾಮಿಗಳ ಬಳಿಬಂದು ವಿಶಾಲವಾದ ಪ್ರಾಕಾರಗಳಿಂದ ಭವ್ಯವಾದ ಮಂದಿರವನ್ನು ನಿರ್ಮಿಸುವುದಕ್ಕೆ ಅರಸನು ಅನುಮತಿಯನ್ನು ಕೇಳಿದನು.
ಆಗ ಮಠದ ಶ್ರೀ ಸ್ವಾಮಿಗಳು ಭಗವಂತನಲ್ಲಿ ಪ್ರಾರ್ಥಿಸಿದಾಗ
ಶ್ರೀಮನ್ನಾರಾಯಣನು ಹೀಗೆ ಹೇಳುತ್ತಾನೆ.
ಭರತಭೂಮಿಯಲ್ಲಿ ಹದಿನೆಂಟು ಕ್ಷೇತ್ರಗಳಲ್ಲಿ ಸಾಲಿಗ್ರಾಮ ಮೂರ್ತಿಯಾಗಿ ಆವಿರ್ಭವಿಸಿ ಅದರಲ್ಲಿಯೂ ಎಂಟು ಕ್ಷೇತ್ರಗಳಲ್ಲಿ ಅಶಿಲ್ಪಿಕರವಾಗಿ(ಸ್ವಯಂ ವ್ಯಕ್ತವಾಗಿ) ಇದ್ದರೂ ದಂಪತಿಯಾಗಿ ಮೊದಲಬಾರಿಗೆ ದರ್ಶನವನ್ನು ನೀಡಿದ ಕ್ಷೇತ್ರ ಮೇಲ್ವೆಣ್ಪಾಕ್ಕಂ, ವಿಶೇಷವಾಗಿ ಶ್ರೀಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರದ ಆವಿರ್ಭಾವದಿಂದ ಪುನೀತವಾದ ಆ ಕ್ಷೇತ್ರ ನನಗೆ ಅತ್ಯಂತ ಪ್ರಿಯವಾದದ್ದು .
ಹಾಗಾಗಿ ಇಂದೇ ನಾವು ಮೇಲ್ವೆಣ್ಪಾಕ್ಕಂ ಕ್ಷೇತ್ರಕ್ಕೆ ಹಿಂದಿರುಗೋಣವೆಂದು ನುಡಿದರು.
ಈ ಮಾತುಗಳನ್ನು ಕೇಳಿ ಅರಸನಿಗೆ ತುಂಬಾ ದು:ಖ ಉಂಟಾಯಿತು ಆದರೂ ಸ್ವಾಮಿಯ ಇಚ್ಚೆಯಂತೇ ಮೇಲ್ವೆಣ್ಪಾಕಕ್ಕೆ ಕಳುಹಿಸಿ ಕೊಟ್ಟರು.
ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿಯನ್ನು ಕ್ಷೇತ್ರಕ್ಕೆ ಕರೆತಂದು
ಸ್ವಾಮಿಯ ಮೂಲಸ್ಥಾನದಲ್ಲಿ ಚಿಕ್ಕದಾದ ಒಂದು ಸನ್ನಿಧಿಯನ್ನು ನಿರ್ಮಿಸಿ ಆಗಮೋಕ್ತವಾಗಿ ಪ್ರತಿಷ್ಠಾದಿಗಳನ್ನು ನೆರವೇರಿಸಿ ನಿತ್ಯವೂ ಪೂಜಾ ಕೈಂಕರ್ಯಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು.
ಸಾವಿರದ ಒಂಭೈನೂರ ಐವತ್ತೇಳನೆಯ(1957) ವರ್ಷ ಶ್ರೀಕಾಂಚೀ ಮೂಲಾಮ್ನಾಯ ಸರ್ವಜ್ಞ
ಪೀಠಾಧೀಶ್ವರರು. ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಶ್ರೀ ಕ್ಷೇತ್ರವನ್ನು ದರ್ಶಿಸಿ ಸ್ವತಃ: ತಾವೇ ಮೂರು ದಿನಗಳ ಕಾಲ ಸ್ವಾಮಿಯನ್ನು ಅರ್ಚಿಸಿದರು. ಕ್ಷೇತ್ರ ವೈಭವವೇ ಅವರ ಮೂರು ದಿನಗಳ ಅನುಗ್ರಹ ಭಾಷಣವಾಗಿತ್ತು.
ಈಗಿರುವಾಗ ಕಾರಾಣಾಂತರಗಳಿಂದ ನಲವತ್ತು ವರ್ಷಗಳ ಕಾಲ ಸ್ವಾಮಿಯ ಪೂಜಾದಿಗಳು ನಿಂತುಹೋದವು.
ದೇವಸ್ಥಾನದ ಕುರಿತಾದ ಎಲ್ಲಾ ವಿಷಯಗಳು ಅಲ್ಲಿನ ಗ್ರಾಮಸ್ಥರು ಮರೆತುಹೋದರು.
ಹಾಗಾದರೆ ಈಗ ನಾವು ಆ ದೇವಸ್ಥಾನವನ್ನು ದರ್ಶಿಸಲು ಸಾಧ್ಯವೇ? ಮತ್ತೆ ಹೇಗೆ ಈ ವಿಷಯಗಳು ಎಲ್ಲರಿಗೂ ತಿಳಿದದ್ದು.


